ಕರ್ತವ್ಯ ನಿರತ ಪೊಲೀಸರಿಗೆ ಧಂಕಿ ಅವಾಚ್ಯ ಶಬ್ದಗಳಿಂದ ನಿಂದನೆ. ಇಬ್ಬರು ಯುವಕರು ಅಂದರ್…

ಪ್ರಕೃತಿ ನ್ಯೂಸ್ ಕರ್ನಾಟಕ

ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಘಟನೆ…ಮೈಸೂರು, ಕನ್ನಡಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಯುವಕರನ್ನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರವಿಚಂದ್ರ ಹಾಗೂ ಭುವನ್ ಬಂಧಿತ ಯುವಕರು.ಕುವೆಂಪುನಗರ ಎಂ ಬ್ಲಾಕ್ ನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಕುವೆಂಪುನಗರ ಠಾಣೆ ಸಿಬ್ಬಂದಿಗಳಾದ ಮಾಲಯ್ಯ ಹಾಗೂ ಸುರೇಶ್ ರವರನ್ನ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ಮೆರವಣಿಗೆ ಶುಭೋಧ ಶಾಲೆ ಬಳಿ ಬಂದಾಗ ರವಿಚಂದ್ರ ಹಾಗೂ ಭುವನ್ ಬಂದು ಡ್ಯಾನ್ಸ್ ಮಾಡುತ್ತಿದ್ದರು.ನಗಾರಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾವು ಹೇಳಿದಂತೆ ಬಾರಿಸಬೇಕೆಂದು ಧಂಕಿ ಹಾಕುತ್ತಿದ್ದರು.ಈ ವೇಳೆ ಕರ್ತವ್ಯ ನಿರತ ಸಿಬ್ಬಂದಿಗಳು ಯುವಕರಿಗೆ ಬುದ್ದಿವಾದ ಹೇಳಿದಾಗ ತಿರುಗಿ ಬಿದ್ದ ರವಿಚಂದ್ರನ್ ಹಾಗೂ ಭುವನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದರು.ಈ ವೇಳೆ ಪಿಎಸ್ಸೈ ಮದನ್ ಕುಮಾರ್ ರವರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದರು.ಮದನ್ ಕುಮಾರ್ ಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾದರು.ರವಿಚಂದ್ರನ್ ಹಾಗೂ ಭುವನ್ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ಠಾಣೆ ಕರೆತಂದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ 

Comments

Popular posts from this blog

ಮರ ಬಿದ್ದು ಮೂರು ಆಟೋ ಜಾಖಂ

ಹುಣಸೂರು: ತಾಲೂಕಿನ ಮೂರು ಕಡೆ ಸರಣಿ ಸರಕಳ್ಳತನ